ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ ೬ರಿಂದ ೧೪ ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ ೨೧A ಕಲಮಿನಡಿ ಜಾರಿಗೊಳಿಸಲಾಗಿದೆ. ಏಪ್ರಿಲ್ ೧, ೨೦೧೦ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ ೧೩೫ ದೇಶಗಳಲ್ಲಿ ಭಾರತವೂ ಒಂದಾಯಿತು. == ಅಂಗೀಕಾರ == ಸಂಪುಟವು ಈ ಮಸೂದೆಯನ್ನು ಜುಲೈ ೨ ೨೦೦೯ರಂದು ಅನುಮೋದಿಸಿತು. ನಂತರ ೨೦ ಜುಲೈ ೨೦೦೯ರಂದು ರಾಜ್ಯಸಭೆ ಮತ್ತು ೪ ಆಗಸ್ಟ್ ೨೦೦೯ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು. ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ ೩ ೨೦೦೯ರಂದು ಇದನ್ನು ಕಾನೂನು ಎಂದು ಘೋಷಿಸಿ ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಕಾಯ್ದೆಯ ಪೂರ್ಣ ಮಾಹಿತಿ 2009-06-19 ವೇಬ್ಯಾಕ್ ಮೆಷಿನ್ ನಲ್ಲಿ.